Monday, August 6, 2012

ಜ್ಞಾನದ ಸಂದೇಶ ಹರಡುವ ಶಿಕ್ಷಕ ಬೆಳ್ಳುಬ್ಬಿ..

ಶ್ರೀ ಸೋಮಶೇಖರ  ಬೆಳ್ಳುಬ್ಬಿ

ವಿಜ್ಞಾನ ಮತ್ತು ತಂತ್ರಜ್ಞಾನದ ಕಬಂಧಬಾಹುಗಳಲ್ಲಿ ಜಗತ್ತು ಚಿಕ್ಕದಾಗುತ್ತಿದೆ. ಸತ್ಯ ಮತ್ತು ಸಂಶೋಧನೆ ನಿರಂತರವಾಗಿ ಈ ಯುಗದ ಪರಿಪಾಟವಾಗಿಬಿಟ್ಟಿದೆ. ಜ್ಞಾನ ಪ್ರಸಾರದ ಹಾದಿ ಹಿಂದಿಗಿಂತಲೂ ಸುಗಮವಾಗುತ್ತಲಿದೆ. ಹಿಂದೊಮ್ಮೆ ಬೇಕಾದ ಮಾಹಿತಿಯನ್ನು ಪಡೆಯಲು ಕೆಲದಿನಗಳೇ ಬೇಕಾಗುತ್ತಿದ್ದವು. ಆದರೆ ಇಂದು ಒಂದು ಬೆರಳ ತುದಿಯಂಚಿಗೆ ಬೇಕಾದ ಮಾಹಿತಿ ಲಭ್ಯವಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲ ಧ್ಯೇಯವೆಂದರೆ ಸಮಾಜಕ್ಕೆ ಒಳಿತಾಗಬೇಕೆಂಬುದು. ಇಂಥ ವಿಜ್ಞಾನ ಮತ್ತು ತಂತ್ರಜ್ಞಾನದ ಸುಗಮ ಆವಿಷ್ಕಾರವೆಂದರೆ ಮೊಬೈಲ್ ಪೋನ್. ಸ್ಮಾರ್ಟ್ ಫೋನ್,ಐಪಾಡ್,ಐಪೊನ್ ಟ್ಯಬ್ಲೆಟ್ ಕಂಪ್ಯುಟರ್ ನಂತಹ ಚತುರ್ವಾಣಿಗಳನ್ನು ಸಾಮಾನ್ಯರಿಗೆ ಬಳಸಲು ಎಲ್ಲೋ ಅಲ್ಪ ಸ್ವಲ್ಪ ತೊಂದರೆ. ಆದರೆ ಸಾಮಾನ್ಯ ಜಂಗಮವಾಣಿಯನ್ನು ಎಲ್ಲರೂ ಬಳಸುತ್ತಾರೆ. ಆದರೆ ಜಮಗಮವಾಣಿಗಳನ್ನು ಬರೀ ಸಂಭಾಷಿಸಲು ಅವರಿವರಿಗೆ ಬರೀ ಕಿಚಾಯಿಸಲು ಬಳಸುವವರೆ ಹೆಚ್ಚು. ಆದರೆ ಕೇವಲ ಒಂದು ಮೊಬೈಲ್ ಫೋನಿನಿಂದ ಒಂದು ಸ್ಪರ್ಧಾತ್ಮಕ ಸಮುದಾಯದ ಅಭಿಲಾಷೆಗಳನ್ನು ಈಡೇರಿಸುವಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ 'ಬನಹಟ್ಟಿ' ಪಟ್ಟಣದ ೊಬ್ಬ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀ ಸೋಮಶೇಖರ ಮಲ್ಲಪ್ಪ ಬೆಳ್ಳುಬ್ಬಿ ಅವರು ಯಶಸ್ವಿಯಾಗಿದ್ದಾರೆ. ಅವರು ಮೊಬೈಲ್ ಫೋನ್ ನ್ನು ಬಳಸಿಕೊಂಡ ರೀತಿಯೇ ವಿಭಿನ್ನ ಮತ್ತು ಶ್ಲಾಘನೀಯ. ಮೊಬೈಲ್ ಫೋನಿನಲ್ಲಿ ಇರುವ ಕಿರು ಸಂದೇಶ ಸೇವೆ(sms)ಯನ್ನು ಇವರು ಜ್ಞಾನ ಪ್ರಸಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತಿದಿನವೂ ಸಾಮಾನ್ಯ ಜ್ಞಾನದ ಸಂದೇಶಗಳನ್ನು 'freegksms' ಎಂಬ ಖಾತೆಯ ಮೂಲಕ ಸಾವಿರಾರು ಸ್ನೇಹಕೂಟಕ್ಕೆ ತಲುಪಿಸುತ್ತಿದ್ದಾರೆ. 

ಸಾಧನೆಯ ಪರಿ...
ಶ್ರೀ ಸೋಮಶೇಖರ ಅವರು ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ತಯಾರಿ ನಡೆಸುವಾಗ ಸಾಮಾನ್ಯ ಜ್ಞಾನದ ವಿಷಯದ ಬಗ್ಗೆ ತುಂಬಾ ಪರದಾಡುವಂತಾಗಿತ್ತು. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಎಲ್ಲರೂ ನಿಗದಿತ ಯಶಸ್ಸನ್ನು ಸಾಧಿಸಲು ಕೇವಲ ಅಧ್ಯಯನ ಅಷ್ಟೇ ಸಾಲದು, ಅಂದು ಬಗೆಯ ಚರ್ಚೆಯು ಬೇಕು ಎಂಬುದನ್ನು ಮನಗಂಡರು. ಆದರೆ ದುರದ ಊರಿನಲ್ಲಿರುವ ಗೆಳೆಯರೊಂದಿಗೆ ಹೇಗೆ ಚರ್ಚಿಸುವುದು ? ಆಗ ಶ್ರೀ ಸೋಮಶೇಖರ ಅವರು ಈ ಮೊಬೈಲ್ sms ನ ಮೊರತೆ ಹೋಗಿದ್ದು. ತರಬೇತರಿಯ ಜೊತೆಗೆ ತಮ್ಮಮ ಮೊಬೈಲಿನಿಂದ ಸಾಮಾನ್ಯ ಜ್ಞಾನದ ಪ್ರಶ್ನೆ ಮಾಹಿತಿಗಳನ್ನು ತಮ್ಮ ಗೆಳೆಯರ ಬಳಗದಲ್ಲಿ ಆರಂಬಭಿಸಿದರು. ಇದರಿಂದಾಗಿ ಗೆಳೆಯರ ಬಳಗದಲ್ಲಿ ಕೆಲವರು ಹಾಗೂ ಶ್ರೀ ಸೋಮಶೇಖರ ಅವರು ಪ್ರಾಥಮಿಕಶಾಲಾ ಶಿಕ್ಷಕರಾಗಿ ಆಯ್ಕೆಯಾದರು. ಆದರೆ ಈ ಯಶಸ್ಸು ಕೇವಲ ತಮಗಷ್ಟೇ ಸೀಮಿತವಾಗಬಾರದೆಂದು ತಿಳಿದು ಅವರಿಗೆ ಪರಿಚಯವಿರುವ ಎಲ್ಲರಿಗೂ ಹಾಗೂ ಡಿ.ಎಡ್,ಬಿಎಡ್,ಪಿಎಸ್ ಐ,ಎಸ್.ಡಿ.ಎ, ಎಫ್.ಡಿ.ಎ, ಕೆಎಎಸ್,ಐಎಎಸ್ ಮುಂತಾದ ಸ್ಪರ್ಧಾರ್ತಿಗಳಿಗೆ ಎಸ್ಸೆಮ್ಮೆಸ್ ಕಳುಹಿಸಲಾರಂಭಿಸಿದರು. ಆದರೆ ದಿನಕ್ಕೆ ಕೇವಲ 200 sms ಮಾತ್ರ ಕಳುಹಿಸಬಹುದುಹಾಗೂ ಕೇವಲ 200 ಮಂದಿಗೆ ಮಾತ್ರ sms  ತಲುಪುವುದನ್ನು ಕಂಡು ಶ್ರೀ ಸೋಮಶೇಖರ ಅವರಿಗೆ ತೃಪ್ತಿಯಾಗಲಿಲ್ಲ. ಆಗ ಅವರು www.mytoday.com ಎಂಬ ಜಾಲ ತಾಣದ ಮೂಲಕ 'getgk' ೆಂಬ ಚಾನೆಲ್ ಆರಂಭಿಸಿದರು.ಇದರ ಮೂಲಕ ಚಂದಾರಾರರಿಗೆ(ಉಚಿತ) ಪ್ರತಿ ದಿನ ಸಾಕಷ್ಟು sms ಗಳನ್ನು ಕಳಿಸಲಾರಂಭಿಸಿದರು. ಇನ್ನೇನು ಯಶಸ್ಸಿನ ಹಾದಿ ಅನತಿ ದೂರದಲ್ಲಿರುವಾಗಲೇ www.mytoday.com ತನ್ನ ಕಾರ್ಯ ನಿಲ್ಲಿಸಿಬಿಟ್ಟಿತು.

ಮತ್ತೊಂದು ಶ್ರಮ..
ಶ್ರೀ ಸೋಮಶೇಖರ  ಅವರು ನಿರಂತರ ಉತ್ಸಾಹಿ. ಅಂತರ್ಜಾಲವನ್ನೆಲ್ಲ ಜಾಲಾಡಿ www.smsgupshup.com ಎಂಬ ಸಂದೇಶ ಜಾಲತಾಣದಲ್ಲಿ ತಮ್ಮದೇ ಆದ 'freegksms' ಎಂಬ ಚಾನೆಲ್ ಆರಂಭಿಸಿದರು. ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳಿಂದ  ಸಂದೇಶಗಳನ್ನು ಒಂದು ಬಾರಿ 'freegksms' ಚಾನೆಲ್ ಗೆ ಕಳುಹಿಸಿದರೆ ಇದರ ಚಂದಾದಾರರಿಗೆ ಏಕಕಾಲದಲ್ಲಿ ಮಾಹಿತಿ ತಲುಪುವಂತಾಯಿತು. ಆಗ ಶ್ರೀ ಸೋಮಶೇಖರ ಅವರು ಪ್ರಚಲಿತ ವಿದ್ಯಮಾನಗಳು, ಮಹತ್ವದ ಅಂಶಗಳು, ಸಾಧಕರು, ಅವರ ಸಾಧನೆಗಳು,ಕಾನೂನಿನ ಸಂಗತಿಗಳು ಹೀಗೆ ಎಲ್ಲದರ ಕುರಿತಾದ  ಮಾಹಿತಿಗಳನ್ನು sms ಮೂಲಕ 'freegksms' ನ ಸದಸ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಈ ಚಾನೆಲ್ಲಿಗೆ ಸುಮಾರು 3000 ಜನರು ಸದಸ್ಯತ್ ಪಡೆದುಕೊಂಡದ್ದನ್ನು ಗಮನಿಸಿದರೆ ಆ ಚಾನೆಲ್ಲಿನ ಪ್ರಾಮುಖ್ಯತೆ ಅರಿವಾಗುತ್ತದೆ. ಮುಂದೆ ಇದರಿಂದ ಉತ್ಸಾಹಗೊಂಡು www.labs.google.co.in/smschannels ನಲ್ಲು 'jnanavedike' ಎಂಬ ಚಾನೆಲ್ ಆರಂಭಿಸಿದರು. ಇಷ್ಟೆಲ್ಲ ಆದರೂ ಶ್ರೀ ಸೋಮಶೇಖರ ಅವರಿಗೆ ಸಮಾಧಾನವಿರಲಿಲ್ಲ. ಇನ್ನೂ ವೇಗವಾಗಿ ಸಾಮಾನ್ಯ ಜ್ಞಾನದ sms ಗಳೂ ಜನರನ್ನು ತಲುಪಬೇಕು ಹಾಗೂ ಹೆಚ್ಚು ಹೆಚ್ಚು sms ಗಳು ಬೇಕು ಎಂಬ ಅವರ ದಾಹಕ್ಕೆ ನೀರೆರೆದದ್ದು www.twitter.com ಎಂಬ ಸಾಮಾಜಿಕ ಜಾಲತಾಣ. ಟ್ವಿಟ್ಟರ್ ಮೂಲಕ 'freegksms' ಎಂಬ ಖಾತೆ ತೆರೆದು ಅದರ ಮೂಲಕ ಇಡೀ ಸಾಮಾನ್ಯ ಜ್ಞಾನದ ವಿಷಯಗಳನ್ನು ಪಸರಿಸಲಾರಂಭಿಸಿದರು. ಅದೂ ಉಚಿತವಾಗಿ. ಜೊತೆಗೆ ಇವರ ಗೆಳೆಯರಾದ  ಶ್ರೀ ಆರ್.ವಿ.ಬಾಗೇವಾಡಿ ಅವರು ಮಾನಸಿಕ ಸಾಮರ್ಥ್ಯ ವಿಷಯದ ಬಗ್ಗೆ ಜವಾಬ್ದಾರಿ ಹೊತ್ತು 'freegksms' ನ್ನು ಜನಪ್ರಿಯಗೊಳಿಸಿದ್ದಾರೆ.
        ಶ್ರೀ ಸೋಮಶೇಖರ ಅವರು ಕೇವಲ sms ಮಾತ್ರ ಕಳುಹಿಸುವುದಿಲ್ಲ. ಬದಲಿಗೆ 'freegksms' ಖಾತೆಯ ಸದಸ್ಯರಿಗೂ ಸಾಮಾನ್ಯ ಜ್ಞಾನದ ಮಾಹಿತಿಗಳನ್ನು upload ಮಾಡಲು ಅವಕಾಶ ನೀಡುತ್ತಾರೆ.online  ಪರೀಕ್ಷೆ ಬರೆದವರ ಹಾಗೂ offline  ಪರೀಕ್ಷೆ ಬರೆದವರ ಅನುಭವಗಳನ್ನು sms  ಮೂಲಕ ಚರ್ಚಿಸುತ್ತಾರೆ. 

freegksms ನ ಸದಸ್ಯರಾಗುವುದು ಹೇಗೆ?
ಯಾರು ಬೇಕಾದರೂ freegksmsನ ಸದಸ್ಯರಾಗಬಹುದು. airtel,tat docomo ಹಗೂ reliance  ನಂಬರ್ ಬಳಕೆದಾರರು FOLLOWFREEGKSMS ಆಂತ 53000 ಗೆ sms ಮಾಡಬೇಕು.ಈ sms ಗೆ ಕೇವಲ 1ರೂ. ಚಾರ್ಜ್ ಆಗುತ್ತದೆ. ಬೇರೆ ಕಂಪನಿಯ ಬಳಕೆದಾರರು JOINFREEGKSMS ಎಂದು 9291592915 sms ಕಳುಹಿಸಿದರೆ 'freegksms' ನ ಸದಸ್ಯತ್ವ ಸಿಗುತ್ತದೆ. ಮುಂದೆ ನಿತಂತರವಾಗಿ ುಚಿತ smsಗಳು ಬರಲಾರಂಭಿಸುತ್ತವೆ.
ಮತ್ತೇನಿದೆ freegksms ನಲ್ಲಿ..?
ಇದರ ಸದಸ್ಯತ್ವ ಪಡೆದವರ ಮೊಬೈಲಿಗೆ @freegksms  ಎಂದು 53000 ನಿಂದ ಸಾಮಾನ್ಯ ಜ್ಞಾನದ sms ಗಳು ಆಯ್ಕೆಗಳೊಂದಿಗೆ ಬರುತ್ತವೆ. ಸದಸ್ಯರು ಉತ್ತರವನ್ನು ಶ್ರೀ ಸೋಮಶೇಖರ ಅವರ ಮೊಬೈಲ್ ನಂಬರ್ರಿಗೆ ಕಳುಹಿಸಬೇಕು.  ಶ್ರೀ ಸೋಮಶೇಖರ ಅವರು ವೇಗವಾಗಿ ಸರಿಯುತ್ತರ ಕಳುಹಿಸುವವರ ಹೆಸರನ್ನು ಪ್ರಕಟಿಸುತ್ತಾರೆ. 
  ಇದಲ್ಲದೆSSLC ವಿದ್ಯಾರ್ಥಿಗಳಿಗೂ ವರದಾನವಾಗುವಂತೆ ಶ್ರೀ ಆರ್.ವಿ.ಬಾಗೇವಾಡಿಯವರ ಸಹಾಯದಿಂದ 'sslctimes  ಎಂಬ ಖಾತೆಯು ಲಭ್ಯವಿದೆ. ಇದರ ಸದಸ್ಯರಾಗಬಯಸುವವರು FOLLOWSSLCTIMES  ಎಂದು 53000 ಗೆ sms ಮಾಡಬೇಕು.
   ಇಂದಿನ ಸ್ಪರ್ಧಾತ್ಮಕ ಸಾಮಾನ್ಯ ಜ್ಞಾನ ಅತ್ಯವಶ್ಯ.ಶ್ರೀ ಸೋಮಶೇಖರ ಬೆಳ್ಳುಬ್ಬಿ ಅವರ ತಂಡವು ಉಚಿತವಾಗಿ sms ನೀಡುತ್ತ ಜನ ಮೆಚ್ಚುಗೆ ಗಳಿಸಿದೆ. ಕೈಯಲ್ಲಿ ಮೊಬೈಲ್ ಹಿಡಿದು ಅನಗತ್ಯ ಹರಟುತ್ತ ಕಾಲಹರಣ ಮಾಡುವ ಯುವಕರ ಮಧ್ಯೆ ಶಿಕ್ಷಕ ಶ್ರೀ ಸೋಮಶೇಖರ ಅವರ ಜ್ಞಾನ ಪ್ರಸಾರದ ಕಾಯಕ ನಿಜಕ್ಕೂ ಅಭಿನಂದನಾರ್ಹ. ಇವರ ಈ ಕಾಯಕಕ್ಕೆ ಮೆಚ್ಚಿ ಶ್ರೀ ಸೋಮಶೇಖರ ಅವರಿಗೆ ಶುಭ ಹಾರೈಸಲು 7676660500ಗೆ ಕರೆ ಮಾಡಬಹುದು. ಅವರ ಬ್ಲಾಗ್ www.freegksms.blogspot.com ಗೆ ಭೇಟಿ ನೀಡಿ,www.twitter.com/freegksmsನ್ನೂ ಜಾಲಾಡಬಹುದು.
                  
                                       ---ಸಚಿನ್ ಕುಮಾರ ಬಿ.ಹಿರೇಮಠ
                                          ಶಿಕ್ಷಕರು, 
                                     9886599941

No comments: